ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಇ- ಕಾರು ಕೊಳ್ಳುವ ಮುನ್ನ ತಿಳಿದಿರಬೇಕಾದ ಮಾಹಿತಿಗಳು

  (ಚಿತ್ರಕೃಪೆ: ಪಿಕ್ಸಬೇ) ಇ- ಕಾರು ಕೊಳ್ಳುವ ಮುನ್ನ ತಿಳಿದಿರಬೇಕಾದ ಮಾಹಿತಿಗಳು ಪೆಟ್ರೊಲ್. ಡೀಸೇಲ್ ಬೆಲೆ ಹೆಚ್ಚಾದ ಮೇಲೆ ಜನರ ಚಿತ್ತ ಇ-ವಾಹನಗಳತ್ತ ಹರಿದಿದೆ. ದಿನದಿಂದ ದಿನಕ್ಕೆ ಈ ವಾಹನಗಳ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಹೊಗೆ ರಹಿತ, ಖರ್ಚು ಕಡಿಮೆ ಮಾಡುವ ಸುಲಭ ಸಾರಿಗೆ ಯಾರಿಗೆ ಬೇಡ? ಕಾರು ಖರೀದಿಸುವ ಸಾಮರ್ಥ್ಯ ಇರುವವರೆಲ್ಲ ಇ-ಕಾರು ಖರೀದಿಗೆ ಹೊರಟಿದ್ದಾರೆ. ನೀವೂ ಸಹ ಇಲೆಕ್ಟ್ರಿಕ್ ಕಾರು ತೆಗೆದುಕೊಳ್ಳಬೇಕೆಂದಿದ್ದರೆ ಈ ಲೇಖನ ಉಪಯುಕ್ತವಾಗಿದೆ. ಪೂರ್ತಿ ಮಾಹಿತಿ ಇಲ್ಲಿದೆ ನೋಡಿ. 1. ಬೆಲೆ : ಚೆಂದ ಮತ್ತು ಸುಲಭ, ಈಗಲೇ ಹೋಗಿ ಖರೀದಿಸುತ್ತೇನೆ ಎಂದರೆ ಸುಲಭವಲ್ಲ. ಸಾಮಾನ್ಯ ಪೆಟ್ರೊಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಇವುಗಳು ದುಬಾರಿ.  ವೈರುಗಳ ಕ್ಲಿಷ್ಟ ಜೋಡಣೆ ಮತ್ತು ದೊಡ್ಡ ಬೆಲೆಯ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಬೇಕಾಗುವುದರಿಂದ ಇಲೆಕ್ಟ್ರಿಕ್ ಕಾರುಗಳ ಬೆಲೆ ಜೇಬಿಗೆ ಹೊರೆಯಾಗಬಹುದು. ಸಣ್ಣ ಹ್ಯಾಚ್ ಬ್ಯಾಕ್ ಕಾರೂ ಸಹ ಕನಿಷ್ಠ 6 ಲಕ್ಷ ರೂ. ಬೆಲೆಬಾಳುತ್ತದೆ. ಸರಕಾರಗಳು ಇವುಗಳಿಗೆ ಸಬ್ಸಿಡಿ ನೀಡುವುದಿಲ್ಲ. 2. ಪ್ರೋತ್ಸಾಹಧನ ಮತ್ತು ತೆರಿಗೆ ವಿನಾಯಿತಿ : ಸರಕಾರಗಳು ಇ-ಕಾರುಗಳಿಗೆ ಪ್ರೋತ್ಸಾಹಧನ ಮತ್ತು ತೆರಿಗೆ ವಿನಾಯತಿ ನೀಡುತ್ತವೆ. ಕೆಲವೊಂದು ಬ್ರಾಂಡುಗಳಿಗೆ ಜಿಎಸ್ ಟಿಯಲ್ಲಿ ಕಡಿತ/ರಹಿತ ಬೆಲೆ ನೀಡುತ್ತದೆ. ಅವುಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ಇ-ಕಾರುಗಳನ್ನು ಖರೀದಿಸಬೇಕು. 3. ತಂತ್ರಾಂಶಗಳ ಗುಣಮಟ್ಟ ಮತ್
ಇತ್ತೀಚಿನ ಪೋಸ್ಟ್‌ಗಳು
 `ಹಸಿರು ವಾಹನ' ಇದು ಕನ್ನಡದಲ್ಲಿ ಇ-ವಾಹನಗಳ ಬಗ್ಗೆ ಮಾಹಿತಿ ಕೊಡುವ ಅಂತರ್ಜಾಲ ತಾಣ. ಇ-ಸ್ಕೂಟರ್ ಮತ್ತು ಇ-ಕಾರ್ ಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀವಿಲ್ಲಿ ಪಡೆಯಬಹುದು. ಪ್ರತಿದಿನ ಹೊಸ ಹೊಸ ವಿಷಯಗಳು, ಮಾಹಿತಿಗಳು, ವಿಶೇಷಗಳು, ವಾಹನಗಳ ಆವೃತ್ತಿಗಳ ಕುರಿತು ಪೋಸ್ಟ್ ಗಳನ್ನು ನೀವಿಲ್ಲಿ ಕಾಣಬಹುದು.